ಮಹಮ್ಮದ್ 2 -
	ಬಹಮನೀ ರಾಜ್ಯದ ಐದನೆಯ ಸುಲ್ತಾನ (1373-97). ಒಂದನೆಯ ಮಹಮ್ಮದನ ತಮ್ಮ ಮಹ್ಮೂದನ ಕಿರಿಯಮಗ. ಈತನ ಅಣ್ಣ ಒಂದನೆಯ ದಾವೂದ್ ಪಟ್ಟವೇರಿದ ಕೆಲವೇದಿನಗಳಲ್ಲಿ ಹಿಂದಿನ ದೊರೆ ಮುಜಾಹಿದನ ಕಡೆಯವರಿಂದ ಕೊಲೆಗೀಡಾದ ಮೇಲೆ ಅವರೇ ಈತನನ್ನು ಪಟ್ಟಕ್ಕೆ ತಂದರು (1378 ಮೇ21). ಈತನ 19 ವರ್ಷಗಳ ಆಳ್ವಿಕೆ ಬಲುಮಟ್ಟಿಗೆ ಶಾಂತಿಯುತವಾಗಿತ್ತು. ಪ್ರಬಲರಾಗಿದ್ದ ವಿಜಯನಗರ ಸಾಮ್ರಾಜ್ಯದವರು ಬಹಮನಿ ರಾಜ್ಯದವಶದಲ್ಲಿದ್ದ ಆದವಾನಿ, ಗೋವ ಮೊದಲಾದ ಪ್ರದೇಶಗಳನ್ನು ವಶಪಡಿಸಿ ಕೊಂಡರು. ಅದಕ್ಕೆ ತೀವ್ರ ಪ್ರತಿಭಟನೆ ನೀಡದಿದ್ದುದೇ ಈ ಶಾಂತಿಗೆ ಕಾರಣ. ಇರಾನೀಯರ ಪ್ರಭಾವ ಬಹಮನೀ ಆಸ್ಥಾನದಲ್ಲಿ ವಿಶೇಷವಾಗಿ ಬೆಳೆಯಿತು.
 	
ಈತ ಸ್ವತಃ ಅರಬ್ಬೀ ಮತ್ತು ಪಾರಸೀ ಭಾಷೆಗಳಲ್ಲಿ ವಿದ್ವಾಂಸನಾಗಿದ್ದ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದ. ಈತ 1397 ಏಪ್ರಿಲ್ 20ರಂದು ಮೃತನಾದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ